contents

Republic Day 2024: ಜ 26 ರಂದೇ ಗಣರಾಜ್ಯೋತ್ಸವ ಆಚರಿಸುವುದೇಕೆ? ಇತಿಹಾಸ, ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

Republic day 2024: ಭಾರತವು ಈ ಬಾರಿ 75ನೇ ವರ್ಷದ ಗಣರಾಜ್ಯೋತ್ಸವ ಸಂಭ್ರಮದಲ್ಲಿದೆ. ಭಾರತವು ಈ ದಿನದಂದೇ ಏಕೆ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ.. ಗಣರಾಜ್ಯೋತ್ಸವ ದಿನಾಚರಣೆ ಹಿಂದಿನ ಇತಿಹಾಸವೇನು ಅದರ ಮಹತ್ವವೇನು ಇಲ್ಲಿದೆ ಮಾಹಿತಿ.

ಗಣರಾಜ್ಯೋತ್ಸವ ಆಚರಣೆಯ ಇತಿಹಾಸ, ಮಹತ್ವ

Republic Day 2024: ಭಾರತವು ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತದೆ. ಈ ವರ್ಷ ಭಾರತವು 75ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮದ ಹೊಸ್ತಿಲಿನಲ್ಲಿದೆ. ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರ ರಾಜಧಾನಿ ದೆಹಲಿ ಕರ್ತವ್ಯ ಪಥ (ರಾಜಪಥ)ದಲ್ಲಿ ಪಥಸಂಚಲನ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ರಾಜ್ಯಗಳ ಸಾಂಸ್ಕೃತಿಕ ಮೆರಗನ್ನು ಸಾರುವ ಸ್ತಬ್ಧ ಚಿತ್ರಗಳ ಪ್ರದರ್ಶನವನ್ನೂ ಮಾಡಲಾಗುತ್ತದೆ. ಭಾರತದ 75ನೇ ವರ್ಷದ ಗಣರಾಜ್ಯೋತ್ಸವದ ಅತಿಥಿಯಾಗಿ ಫ್ರಾನ್ಸ್​ನ ಅಧ್ಯಕ್ಷ ಎಮಾನ್ಯುಲ್​ ಮ್ಯಾಕ್ರನ್​​ ಆಗಮಿಸಲಿದ್ದಾರೆ.

ಭಾರತೀಯರು ಪ್ರತಿ ವರ್ಷ ಗಣರಾಜ್ಯೋತ್ಸವದ ದಿನದಂದು ಸ್ತಬ್ಧಚಿತ್ರಗಳ ಪ್ರದರ್ಶನದ ಮೂಲಕ ಭಾರತದ ಶ್ರೀಮಂತ ಸಂಸ್ಕೃತಿ , ಪರಂಪರೆ , ದೇಶವು ಸಾಧಿಸಿದ ಪ್ರಗತಿ ಹಾಗೂ ಸಾಧನೆಗಳನ್ನು ಸಾರುತ್ತಲೇ ಬಂದಿದ್ದಾರೆ. ಭಾರತೀಯ ವಾಯುಸೇನೆ, ನೌಕಾಪಡೆ ಹಾಗೂ ಭೂಸೇನೆಯ ಮೈನವರೇಳಿಸುವ ಪ್ರದರ್ಶನಗಳು ಕೂಡ ಗಣರಾಜ್ಯೋತ್ಸವ ದಿನಾಚರಣೆಯ ಪ್ರಮುಖ ಆಕರ್ಷಣೆಗಳ ಪೈಕಿ ಒಂದಾಗಿದೆ.

ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ನಿಮ್ಮ ಮಗುವಿಗೆ ದೇಶಭಕ್ತರ ವೇಷ ಹಾಕಿಸಬೇಕಾ? ಇಲ್ಲಿದೆ ನೋಡಿ ಬೆಸ್ಟ್‌ ಐಡಿಯಾಗಳು

ಗಣರಾಜ್ಯೋತ್ಸವ ದಿನಾಚರಣೆಯ ಇತಿಹಾಸ

1950ರ ಜನವರಿ 26ರಂದು ಭಾರತೀಯ ಸಂವಿಧಾನವನ್ನು ಔಪಚಾರಿಕವಾಗಿ ಅಂಗೀಕರಿಸಲಾಯಿತು. ಹೀಗಾಗಿ ಅಂದಿನಿಂದ ಜನವರಿ 26ನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಭಾರತವು 1947ರ ಆಗಸ್ಟ್​ 15ರಂದು ಬ್ರಿಟೀಷರ ಆಳ್ವಿಕೆಯಿಂದ ಮುಕ್ತಿಯನ್ನು ಪಡೆದ ಭಾರತಕ್ಕಾಗಿ ಸಂವಿಧಾನ ರಚನೆಯ ಕಾರ್ಯ ಆರಂಭಗೊಂಡಿತು. ಸಂವಿಧಾನ ಶಿಲ್ಪಿ ಬಿ. ಆರ್‌.​ ಅಂಬೇಡ್ಕರ್​ ರಚಿಸಿದ ಭಾರತೀಯ ಸಂವಿಧಾನವು 1950ರ ಜನವರಿ 26ರಂದು ಜಾರಿಗೆ ಬಂದಿತು. 1946ರ ಡಿಸೆಂಬರ್​ 9ರಂದು ಭಾರತದ ಮೊಟ್ಟ ಮೊದಲ ಸಂವಿಧಾನ ಸಂಬಂಧಿ ಸಭೆ ನಡೆಸಲಾಯಿತು. 1949ರ ನವೆಂಬರ್​ 26ರಂದು ಅಂತಿಮ ಬಾರಿ ಸಭೆ ಸೇರಿತು. ಈ ದಿನವನ್ನು ಸಂವಿಧಾನ ದಿನವಾಗಿಯೂ ಆಚರಿಸಲಾಗುತ್ತದೆ.

1950ರ ಜನವರಿ 26ರಂದು ಭಾರತವು ಗಣರಾಜ್ಯವಾಗಿದೆ ಎಂಬುದನ್ನು ತಿಳಿಸಲು ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್​​ ಭಾರತದ ಬಾವುಟವನ್ನು ಹಾರಿಸಿದ್ದರು. ಈ ದಿನದಂದು ಭಾರತವು ಗಣರಾಜ್ಯವಾಗಿ ಕರೆಸಿಕೊಂಡ ಹಿನ್ನೆಲೆಯಲ್ಲಿ ಈ ದಿನವನ್ನು ರಾಷ್ಟ್ರೀಯ ಹಬ್ಬದ ದಿನವನ್ನಾಗಿ ಪರಿಗಣಿಸವಂತೆ ನಿರ್ಧರಿಸಲಾಯ್ತು.

ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಸಿದ್ಧರಾಗುತ್ತಿರುವ ಶಾಲಾ ಮಕ್ಕಳಿಗಾಗಿ ಇಲ್ಲಿದೆ ಭಾಷಣ

ವಿದೇಶದಿಂದ ಗಣ್ಯ ವ್ಯಕ್ತಿಗಳ ಆಹ್ವಾನ

ಭಾರತವು ಪ್ರತಿ ವರ್ಷವು ಗಣರಾಜ್ಯೋತ್ಸವ ದಿನಕ್ಕೆ ವಿದೇಶದಿಂದ ಗಣ್ಯ ವ್ಯಕ್ತಿಗಳನ್ನು ಅತಿಥಿಗಳನ್ನಾಗಿ ಆಹ್ವಾನಿಸುತ್ತದೆ. ಭಾರತದ ಮೊಟ್ಟ ಮೊದಲ ಗಣರಾಜ್ಯೋತ್ಸವ ಅತಿಥಿಯಾಗಿ ಭಾರತಕ್ಕೆ ಇಂಡೋನೇಷ್ಯಾದ ಅಧ್ಯಕ್ಷ ಸುಕರ್ನೋ ಆಗಮಿಸಿದ್ದರು. ಭಾರತವು 1955ರಿಂದ ಗಣರಾಜ್ಯೋತ್ಸವ ಪರೇಡ್​ ನಡೆಸುತ್ತಾ ಬಂದಿದೆ. ಈಗ ಮೋದಿ ಸರ್ಕಾರವು ಕರ್ತವ್ಯಪಥ ಎಂದು ಮರು ನಾಮಕರಣ ಮಾಡಿರುವ ಸ್ಥಳವನ್ನು ಮೊದಲು ರಾಜಪಥ ಎಂದು ಕರೆಯಲಾಗುತ್ತದೆ. ಮೊಟ್ಟ ಮೊದಲ ಬಾರಿಗೆ ಗಣರಾಜ್ಯೋತ್ಸವ ಮೆರವಣಿಗೆ ನಡೆದ ಗಣರಾಜ್ಯೋತ್ಸವ ದಿನದಂದು ಭಾರತಕ್ಕೆ ವಿಶೇಷ ಅತಿಥಿಯಾಗಿ ಪಾಕಿಸ್ತಾನದ ಗವರ್ನರ್​ ಜನರಲ್​ ಮಲಿಕ್​ ಗುಲಾಮ್​ ಮಹಮ್ಮದ್​ ಆಗಮಿಸಿದ್ದರು.

ಗಣರಾಜ್ಯೋತ್ಸವ ದಿನವನ್ನು ಇಡೀ ಭಾರತೀಯರು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ರಾಷ್ಟ್ರಪತಿಗಳು ರಾಷ್ಟ್ರಧ್ವಜ ಹಾರಿಸುತ್ತಾರೆ. ಇದಾದ ಬಳಿಕ ವಿವಿಧ ರಾಜ್ಯಗಳು ಹಾಗೂ ಸರ್ಕಾರಿ ಇಲಾಖೆಗಳಿಂದ ಭವ್ಯ ಮೆರವಣಿಗೆ ನಡೆಯತ್ತದೆ. ಜೊತೆಗೆ ಮಿಲಿಟರಿ ಹಾಗೂ ಸಾಂಸ್ಕೃತಿಕ ಪ್ರದರ್ಶನವಿರುತ್ತದೆ. ಭಾರತದ ರಾಷ್ಟ್ರಪತಿಗಳು ಪರಮವೀರ ಚಕ್ರ, ಅಶೋಕ ಚಕ್ರ ಹಾಗೂ ವೀರಚಕ್ರವನ್ನು ವೀರ ಯೋಧರಿಗೆ ನೀಡುತ್ತಾರೆ. ಅಲ್ಲದೇ ಪದ್ಮ ಪ್ರಶಸ್ತಿಗಳನ್ನು ಅರ್ಹ ನಾಗರಿಕ ನೀಡಿ ಗೌರವಿಸಲಾಗುತ್ತದೆ .

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ.

ಇಮೇಲ್: [email protected]

Whats_app_banner

  • ಗಣರಾಜ್ಯೋತ್ಸವ ದಿನ
  • ನೈಋತ್ಯ ರೈಲ್ವೆ ನೇಮಕಾತಿ
  • ಐಡಿಬಿಐ 1000 ಹುದ್ದೆಗೆ ಅರ್ಜಿ ಆಹ್ವಾನ
  • ಬೆಂಗಳೂರು ಸಿಡಾಕ್‌ ಉದ್ಯೋಗ
  • ಅರಿವು ಶೈಕ್ಷಣಿಕ ಸಾಲಕ್ಕೆ ಅರ್ಜಿ ಆಹ್ವಾನ
  • kannada News
  • Republic Day Speech In Kannada For Students Pdf Check Here

ಜನವರಿ 26 ರಂದು ಗಣರಾಜ್ಯೋತ್ಸವ ಕುರಿತು ಭಾಷಣಕ್ಕೆ, ಪ್ರಬಂಧ ಬರವಣಿಗೆಗೆ ವಿದ್ಯಾರ್ಥಿಗಳಿಗಾಗಿ ಸಲಹೆಗಳು

Republic day speech, essay for students : ಪ್ರತಿ ವರ್ಷ ಜನವರಿ 26 ರಂದು ಭಾರತ ದೇಶವು ಗಣರಾಜ್ಯವಾದ ದಿನವನ್ನು / ಸಂವಿಧಾನ ಜಾರಿಗೆ ಬಂದ ದಿನವನ್ನು ಸ್ಮರಿಸಲು ಗಣರಾಜ್ಯೋತ್ಸವ, ರಿಪಬ್ಲಿಕ್ ಡೇ ಎಂದು ಆಚರಣೆ ಮಾಡುತ್ತದೆ. ಈ ದಿನದಂದು ಭಾಷಣ ಮಾಡಲು ನೀವು ಸ್ಫೂರ್ತಿಗೊಂಡಿದ್ದರೆ ಇಲ್ಲಿದೆ ನೋಡಿ ಸುಲಭ ಭಾಷಣ, ಪ್ರಬಂಧ ಬರವಣಿಗೆಗೆ ಸಲಹೆಗಳು..

  • ರಿಪಬ್ಲಿಕ್ ಡೇ ಕಿರು ಭಾಷಣ ಹೇಗಿರಬೇಕು?
  • ಗಣರಾಜ್ಯೋತ್ಸವ ಕುರಿತು ಪ್ರಬಂಧಕ್ಕೆ ಬೆಸ್ಟ್‌ ಸಲಹೆಗಳೇನು?
  • ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Republic Day 2024 Speech

  • ಈ ಕಾರ್ಯಕ್ರಮದಲ್ಲಿ ಆಸೀನರಿರುವ ನನ್ನ ಗುರುವೃಂದದವರಿಗೆ ಹಾಗೂ ನನ್ನ ನೆಚ್ಚಿನ ಸಹಪಾಠಿಗಳೆಲ್ಲರಿಗೂ 75ನೇ ಗಣರಾಜ್ಯೋತ್ಸವ ದಿನದ ಶುಭಾಶಯಗಳು.
  • ಈ ಶುಭ ದಿನದಂದು ಗಣರಾಜ್ಯೋತ್ಸವದ ಕುರಿತು ಒಂದೆರಡು ಮಾತನಾಡಲು ನನಗೆ ಅವಕಾಶ ಸಿಕ್ಕಿದ್ದು, ನನಗೆ ತುಂಬಾ ಸಂತೋಷವಾಗಿದೆ.
  • ಸ್ನೇಹಿತರೆ ಭಾರತ ಸಂವಿಧಾನವು 1949 ರ ನವೆಂಬರ್ 26 ರಂದು ಅಂಗೀಕಾರವಾಗಿ, 1950 ರ ಜನವರಿ 26 ರಂದು ಜಾರಿಗೆ ಬಂತು.
  • ಈ ದಿನವನ್ನು ಸಂಭ್ರಮಿಸಲು ನಾವು ಪ್ರತಿ ವರ್ಷ ಈ ದಿನಾಂಕದಂದು ಗಣರಾಜ್ಯೋತ್ಸವವನ್ನು ಆಚರಣೆ ಮಾಡುತ್ತೇವೆ.
  • ಅಂತೆಯೇ ನಾವಿಂದು 75ನೇ ಗಣರಾಜ್ಯೋತ್ಸವ ದಿನವನ್ನು ಆಚರಣೆ ಮಾಡುತ್ತಿದ್ದೇವೆ.
  • ಈ ದಿನಕ್ಕೆ ಅಷ್ಟೊಂದು ಮಹತ್ವ ಏಕೆ ಎಂದರೆ ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ಕಾರಣದಿಂದಲೇ ದೇಶದ ಪ್ರತಿಯೊಬ್ಬ ಪ್ರಜೆಗೂ ಸಹ ಸಮಾನ ಶಿಕ್ಷಣ, ಪ್ರತಿಯೊಬ್ಬರಿಗೂ ಬೇಕಾದ ಮೂಲಭೂತ ಹಕ್ಕುಗಳು, ಶಿಕ್ಷಣ ಹಕ್ಕುಗಳು, ಧಾರ್ಮಿಕ ಹಕ್ಕುಗಳು ಇವೆಲ್ಲವೂ ಸಹ ಸಿಕ್ಕಿದ್ದು.
  • ಸಂವಿಧಾನ ಎಂಬುದು ಭಾರತದ ಸರ್ವೋಚ್ಛ ಕಾನೂನು.
  • ನಮ್ಮ ಸಂವಿಧಾನವು ರಷ್ಯಾ, ಬ್ರಿಟನ್, ಅಮೆರಿಕಾ, ಇತರೆ ದೇಶಗಳ ಸಂವಿಧಾನಗಳ ಅಂಶಗಳನ್ನು ಹೊಂದಿದ್ದು, ಅವುಗಳ ಸಂಯೋಜನೆ ಆಗಿದೆ.
  • ಇದೊಂದು ಬೃಹತ್‌ ಸಂವಿಧಾನವಾಗಿದ್ದು, ಇದರ ಜಾರಿಗೆ ಮಹತ್ವದ ಕೊಡುಗೆ ನೀಡಿದವರು ಡಾ ಬಿ.ಆರ್‌.ಅಂಬೇಡ್ಕರ್‌ ರವರು.
  • ಆದ್ದರಿಂದ ಅಂಬೇಡ್ಕರ್‌ ರನ್ನು ಭಾರತ ಸಂವಿಧಾನದ ಪಿತಾಮಹರು ಎನ್ನಲಾಗುತ್ತದೆ.
  • ನಾವು ಈ ಸಂವಿಧಾನವನ್ನು ಗೌರವಿಸಬೇಕು. ಅದರಲ್ಲಿ ಇರುವ ನಿಯಮಗಳನ್ನು ಅನುಸರಿಸಬೇಕು. ಮೂಲಭೂತ ಹಕ್ಕುಗಳಂತೆ, ದೇಶದ ಪ್ರಜೆಗಳಾಗಿ ಇದರಲ್ಲಿ ನೀಡಲಾದ ಮೂಲಭೂತ ಕರ್ತವ್ಯಗಳನ್ನು ಸಹ ಪಾಲಿಸಬೇಕು.
  • ಪ್ರತಿವರ್ಷವು ಸಹ ಈ ದಿನವನ್ನು ಆಚರಿಸಿ, ಧ್ವಜಾರೋಹಣ ಮಾಡಿ ಗೌರವವನ್ನು ಸಲ್ಲಿಸಬೇಕು.
  • ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಏಕತೆ, ಭ್ರಾತೃತ್ವ ನಮ್ಮ ಸಂವಿಧಾನದಲ್ಲಿ ಇರುವ ಐದು ಪ್ರಮುಖ ಮೌಲ್ಯಗಳಾಗಿವೆ.

ಸುನೀಲ್ ಬಿ ಎನ್

ಓದಲೇ ಬೇಕಾದ ಸುದ್ದಿ

ಚಳಿಗಾಲದಲ್ಲಿ ಕಾಡುವ ಮಲವಿಸರ್ಜನೆ ಸರಿಯಾಗಿ ಆಗದಿರುವ ಸಮಸ್ಯೆಗೆ ಸರಳ ಪರಿಹಾರಗಳು

ಮುಂದಿನ ಲೇಖನ

KCET ಗೆ ತರಬೇತಿ ಜತೆಗೆ ವೃತ್ತಿಪರ ಕೋರ್ಸ್‌ ಮಾರ್ಗದರ್ಶನ ನೀಡುವ ವಿದ್ಯಾಮೃತ ಸ್ಕಾಲರ್‌ಶಿಪ್‌ ಕಾರ್ಯಕ್ರಮ

IMAGES

  1. Republic Day Speech in Kannada 2021

    republic day information in kannada essay

  2. 10 lines on republic day in kannada/essay on republic day in kannada/ REPUBLIC DAY SPEECH IN KANNADA

    republic day information in kannada essay

  3. Republic day Speech in Kannada 2019| Kannada Speech on Republic Day

    republic day information in kannada essay

  4. Republic Day Speech In Kannada 2021

    republic day information in kannada essay

  5. ಗಣರಾಜ್ಯೋತ್ಸವದ ಬಗ್ಗೆ ಪ್ರಬಂಧ

    republic day information in kannada essay

  6. ಗಣರಾಜ್ಯೋತ್ಸವ

    republic day information in kannada essay